ದಕ್ಷಿಣ ಭಾರತದ ಯೋಧ ಕುಲಗಳಲ್ಲಿ ಅನಿರೀಕ್ಷಿತ ಮಧ್ಯಪ್ರಾಚ್ಯ ಅನುವಂಶ
ನೈ ಋತ್ಯ ಭಾರತದ ಪಶ್ಚಿಮ ಘಟ್ಟಗಳ ಹಾಗೂ ಅರಬ್ಬಿ ಸಮುದ್ರದ ಕರಾವಳಿಯ ನಡುವೆ ಕಂಡುಬರುವ ಕಿರಿದಾದ ಪ್ರದೇಶವು ಶ್ರೀಮಂತ ಸಂಪ್ರದಾಯಗಳನ್ನು ಹಾಗೂ ಜನಪದವನ್ನು ಒಳಗೊಂಡ ಹಲವಾರು ಅಂತರ್ವಿವಾಹ ಜನಾಂಗದ ವಾಸಸ್ಥಾನವಾಗಿದ್ದು , ಜನಾಂಗೀಯ ಭಾಷಾ ವೈವಿಧ್ಯತೆಯ ತಾಣವಾಗಿದೆ . ಇಂಡೋ ಯುರೋಪಿಯನ್ ಹಾಗೂ ದ್ರಾವಿಡ ಎಂಬ ಜಗತ್ತಿನ ಅತಿದೊಡ್ಡ ಭಾಷಾ ಕುಟುಂಬಗಳು ಈ ಪ್ರದೇಶದಲ್ಲಿ ಶತಮಾನಗಳಿಂದ ಬೆರೆತುಕೊಂಡಿದ್ದಾರೆ . ಯುರೋಪಿನ ವಸಾಹತುಶಾಹಿ ಸಾಮ್ರಾಜ್ಯಗಳನ್ನು ಸೇರಿದಂತೆ ಅರಬ್ಬರು , ರೋಮನ್ನರು ಹಾಗೂ ಗ್ರೀಕರನ್ನು ಆಕರ್ಷಿಸಿದ್ದ ಪುರಾತಣ ಬಂದರುಗಳು ಈ ಪರಿಸರದಲ್ಲಿ ಕಾಣಬಹುದು . ಈ ಉಷ್ಣವಲಯದ ಭೂದೃಶ್ಯದಲ್ಲಿ ಅಡಿಕೆ , ತೆಂಗು ಮುಂತಾದ ಸಾಂಬಾರು ಪದಾರ್ಥಗಳನ್ನು ಹೆಚ್ಚಳವಾಗಿ ಬೆಳೆಸುವ ಕೃಷಿಕರನ್ನು ಹಾಗೂ ಪರಂಪರಾಗತವಾಗಿ ಪೌರೋಹಿತ್ಯ , ಬೇಟೆಗಾರಿಕೆ ಹಾಗೂ ಶಿಲ್ಪಕಲೆಗಳ ವೃತ್ತಿಯನ್ನು ಅವಲಂಬಿಸಿಕೊಂಡಿರುವವರನ್ನು ಒಳಗೊಂಡ ಸಂಕೀರ್ಣ ಸಾಮಾಜಿಕ ರಚನೆಯನ್ನು ಹೊಂದಿಕೊಂಡ ಪ್ರದೇಶ ಇದಾಗಿದೆ . ಮಾತ್ರವಂಶಿಯ ಅನುವಂಶಿಕತೆಯನ್ನು ಹೊಂದಿರುವ ವಿಶಿಷ್ಟ ಯೋಧ ಕುಲಗಳಾದ ಬಂಟರು , ತಿಯ್ಯರು ಹಾಗೂ ನಾಯರ್ಗಳು ನೈಋತ್ಯ ಕರಾವಳಿ ಪ್ರದೇಶದಲ್ಲಿ ನೆಲೆಸಿದ್ದು , ಇವರು ಉತ್ತರಭಾರತ ಹಾಗೂ ಶ್ರೀ ಲಂಕಾದಿಂದ ವಲಸೆ ಬಂದಿರುವರೆಂದು ಐತಿಹಾಸಿಕ ಪುರಾವೆಗಳಲ್ಲಿ ಉಲ್ಲೇಖವಾಗಿದೆ . ಆದರೆ ಆನುವಂಶಿಕ ಪುರಾವೆಗಳು ? ಡಾ . ಕೆ . ತಂಗರಾಜ್ ನೇತೃತ್ವದ ಭಾರತೀಯ ಸಂಶೋಧಕರ ಗುಂಪು ಆನುವಂಶಿ...