ನಾವು ಯಾರು? ಎಲ್ಲಿಂದ ಬಂದವರು? ಎಲ್ಲಿಗೆ ನಮ್ಮ ಪಯಣ?
Image for illustration purposes only ಮಾ ನವನಿಗೆ ತನ್ನ ವಿಕಾಸದ ಹಾದಿಯನ್ನು ತಿಳಿದುಕೊಳ್ಳುವ ಬಗ್ಗೆ ಸದಾ ಕುತೂಹಲ. ಈ ಕುತೂಹಲವೇ ಇಂದಿನ ವೈಜ್ಞಾನಿಕ ಸಂಶೋಧನೆಗೆ ದಾರಿದೀಪ. ತಾನು ಯಾರು ?ತಾನು ಎಲ್ಲಿಂದ ಬಂದೆ? ತನ್ನೊಳಗಿನ ವಿಕಾಸದ ಕುರುಹುಗಳೇನು? ಎಂಬ ಸಾವಿರಾರು ಪ್ರಶ್ನೆಗಳ ಸುರಿಮಳೆ ಇಂದು ಇತಿಹಾಸವನ್ನು ಬಗೆದು ವಿಕಾಸದ ಪಯಣವನ್ನು ಅನಾವರಣಗೊಳಿಸಿದೆ. ಇತಿಹಾಸ ಕೇವಲ ಪುಸ್ತಕಗಳಲ್ಲಿ ಉಳಿದಿಲ್ಲ ಅದು ನಮ್ಮ ಜೀವಕೋಶಗಳಲ್ಲೇ ಜೀವಂತವಾಗಿದೆ. ನೊಬೆಲ್ ಪ್ರಶಸ್ತಿ ವಿಜೇತರಾದ ಸ್ವಾಂತೆ ಪ್ಯಾಬೊ ಅವರು ಅನುವಂಶೀಯ ವಿಜ್ಞಾನದ ಕ್ರಾಂತಿಗೆ ನೀಡಿದ ಕೊಡುಗೆಗೆ ನಾವು ತಲೆಬಾಗಲೇಬೇಕು. ಸುಮಾರು 600,000 ವರ್ಷಗಳ ಹಿಂದೆ ನಿಯಾಂಡರ್ತಾಲ್, ಡೆನಿಸೊವನ್ ಮತ್ತು ಆಧುನಿಕ ಮಾನವರು ಒಂದೇ ಮೂಲ ಪೂರ್ವಜರನ್ನು ಹೊಂದಿದ್ದರು ಎಂದು ಹೇಳಲಾಗಿದೆ. ಕಳೆದ ಹಲವು ದಶಕಗಳಿಂದ ನಾವು ನಮ್ಮ ಕಳೆದುಹೋದ ಪುರಾತನರಾದ ನಿಯಾಂಡರ್ತಾಲ್ ಮತ್ತು ಡೆನಿಸೊವನ್ ರನ್ನು ಹುಡುಕುತ್ತಿದ್ದೇವೆ. ಸಂಶೋಧನೆಗಳು ಹೇಳುವುದೇನೆಂದರೆ ನಮ್ಮ ಪೂರ್ವಜರು ಈ ಗುಂಪಿನ ಮಾನವರೊಡನೆ ಮಿಶ್ರಣಗೊಂಡಿದ್ದರು (ಅಂದರೆ ಅನುವಂಶೀಯ ಸಂಕರಣೆ ನಡೆದಿತ್ತು). ಇದರ ಪರಿಣಾಮವಾಗಿ ಆಫ್ರೀಕಾದ ದಕ್ಷಿಣ ಭಾಗದಲ್ಲಿರುವ ಸಹರಾ ಮರುಭೂಮಿಯನ್ನು ಹೊರತುಪಡಿಸಿ ಉಳಿದ ಜನಾಂಗದಲ್ಲಿ 2 ಶೇಕಡಾದಷ್ಟು ನಿಯಾಂಡರ್ತಾಲ್ ಡಿಎನ್‌ಎ ಕಂಡುಬಂದಿದೆ. ಹಾಗೆಯೇ ಓಷಿಯಾನಿಯಾ ಮೂಲದ ಜನರಲ್ಲಿ ಸು...