ಬ್ರಾಹ್ಮಣರ ಪಿತೃವಂಶದಲ್ಲಿ ಗೋತ್ರದ ಮಹತ್ವ: ಅನುವಂಶಿಕ ಅಧ್ಯಯನ
(A) Distribution of gotras among Indian brahmins (B) Distribution of paternal haplogroups among gotras ನಿ ಮಗೆ ಎಂದಾದರೂ ನಿಮ್ಮ ಕುಟುಂಬದ ಮೂಲಗಳ ಕುರಿತು ತಿಳಿಯುವ ಕುತೂಹಲ ಮೂಡಿದೆಯೇ? ಹಾಗಾದರೆ ಇದರ ಹಿಂದೆ ಅವಿತಿರುವ ವೈಜ್ಞಾನಿಕ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ. ಮಾನವನ ಡಿಎನ್‌ಎ ಸರಪಳಿಯು ಕಾಲಾಂತರದ ನೆನಪುಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆ ಎಂದಾಗ ಅಚ್ಚರಿಯಾಗುತ್ತದೆಯಲ್ಲವೇ …ಹೌದು ಭವಿಷ್ಯದ ಏಳಿಗೆಗೆ ದಾರಿದೀಪವಾದ ವೈಜ್ಞಾನಿಕ ಸಂಶೋಧನೆಗಳು ಮನುಕುಲದ ಪೂರ್ವಜರನ್ನು ಇಂದಿನ ಜನಾಂಗಕ್ಕೆ ಪರಿಚಯಿಸುತ್ತಿದೆ. ಬ್ರಾಹ್ಮಣರಲ್ಲಿಅದೊಂದು ಅದೃಶ್ಯ ನಂಟು ತಲೆಮಾರುಗಳನ್ನು ಸಂಪರ್ಕಿಸುತ್ತದೆ, ಅದೇ “ಗೋತ್ರ ಪದ್ಧತಿ “. ಇದೊಂದು ಹಳೆಯ ಜಿಪಿಎಸ್ ಇದ್ದ ಹಾಗೆ. ಇದು ಕೇವಲ ವಂಶಾವಳಿಯ ಗುರುತು ಎನ್ನುವುದಕ್ಕಿಂತ ಹೆಚ್ಚಾಗಿ, ಸಾವಿರಾರು ವ಼ರ್ಷಗಳ ಹಿಂದಿನ ಅಜ್ಜ-ಮುತ್ತಜ್ಜರನ್ನೂ ಮೀರಿ ಪೌರಾಣಿಕ ಋಷಿಗಳ ಕಾಲದವರೆಗೆ ಹೋಗುತ್ತದೆ.ಈ ಪಧ್ದತಿಯ ಪ್ರಕಾರ ಒಂದೇ ಗೋತ್ರಕ್ಕೆ ಸೇರಿದ ವ್ಯಕ್ತಿಗಳ ನಡುವೆ ವಿವಾಹವನ್ನು ನಿಷೇಧಿಸಲಾಗಿದೆ. ಕಾರಣವೇನೆಂದರೆ ಇವರುಗಳು ಈ ಹಿಂದೆ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಸಹೋದರ-ಸಹೋದರಿಯರು (ಒಡಹುಟ್ಟಿದವರು) ಕಾಲದಿಂದ ಪ್ರತ್ಯೇಕವಾದಂತೆ ಪರಿಗಣಿಸುತ್ತದೆ.ಈ ವ್ಯವಸ್ತೆಯು ಸಪ್ತಋಷಿಗಳಿಗೆ (ಏಳು ಪೌರಾಣಿಕ ಋಷಿಗಳು)ಸಂಬಂಧಿಸಿದೆ. ಆದರೆ ಕಡಿಮೆ ಪರಿಚಿತ ಪದವಾದ “...