ಬ್ರಾಹ್ಮಣರ ಪಿತೃವಂಶದಲ್ಲಿ ಗೋತ್ರದ ಮಹತ್ವ: ಅನುವಂಶಿಕ ಅಧ್ಯಯನ
![]() |
| (A) Distribution of gotras among Indian brahmins (B) Distribution of paternal haplogroups among gotras |
ನಿಮಗೆ ಎಂದಾದರೂ ನಿಮ್ಮ ಕುಟುಂಬದ ಮೂಲಗಳ ಕುರಿತು ತಿಳಿಯುವ ಕುತೂಹಲ ಮೂಡಿದೆಯೇ? ಹಾಗಾದರೆ ಇದರ ಹಿಂದೆ ಅವಿತಿರುವ ವೈಜ್ಞಾನಿಕ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ. ಮಾನವನ ಡಿಎನ್‌ಎ ಸರಪಳಿಯು ಕಾಲಾಂತರದ ನೆನಪುಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆ ಎಂದಾಗ ಅಚ್ಚರಿಯಾಗುತ್ತದೆಯಲ್ಲವೇ …ಹೌದು ಭವಿಷ್ಯದ ಏಳಿಗೆಗೆ ದಾರಿದೀಪವಾದ ವೈಜ್ಞಾನಿಕ ಸಂಶೋಧನೆಗಳು ಮನುಕುಲದ ಪೂರ್ವಜರನ್ನು ಇಂದಿನ ಜನಾಂಗಕ್ಕೆ ಪರಿಚಯಿಸುತ್ತಿದೆ.
ಬ್ರಾಹ್ಮಣರಲ್ಲಿಅದೊಂದು ಅದೃಶ್ಯ ನಂಟು ತಲೆಮಾರುಗಳನ್ನು ಸಂಪರ್ಕಿಸುತ್ತದೆ, ಅದೇ “ಗೋತ್ರ ಪದ್ಧತಿ “. ಇದೊಂದು ಹಳೆಯ ಜಿಪಿಎಸ್ ಇದ್ದ ಹಾಗೆ. ಇದು ಕೇವಲ ವಂಶಾವಳಿಯ ಗುರುತು ಎನ್ನುವುದಕ್ಕಿಂತ ಹೆಚ್ಚಾಗಿ, ಸಾವಿರಾರು ವ಼ರ್ಷಗಳ ಹಿಂದಿನ ಅಜ್ಜ-ಮುತ್ತಜ್ಜರನ್ನೂ ಮೀರಿ ಪೌರಾಣಿಕ ಋಷಿಗಳ ಕಾಲದವರೆಗೆ ಹೋಗುತ್ತದೆ.ಈ ಪಧ್ದತಿಯ ಪ್ರಕಾರ ಒಂದೇ ಗೋತ್ರಕ್ಕೆ ಸೇರಿದ ವ್ಯಕ್ತಿಗಳ ನಡುವೆ ವಿವಾಹವನ್ನು ನಿಷೇಧಿಸಲಾಗಿದೆ. ಕಾರಣವೇನೆಂದರೆ ಇವರುಗಳು ಈ ಹಿಂದೆ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಸಹೋದರ-ಸಹೋದರಿಯರು (ಒಡಹುಟ್ಟಿದವರು) ಕಾಲದಿಂದ ಪ್ರತ್ಯೇಕವಾದಂತೆ ಪರಿಗಣಿಸುತ್ತದೆ.ಈ ವ್ಯವಸ್ತೆಯು ಸಪ್ತಋಷಿಗಳಿಗೆ (ಏಳು ಪೌರಾಣಿಕ ಋಷಿಗಳು)ಸಂಬಂಧಿಸಿದೆ. ಆದರೆ ಕಡಿಮೆ ಪರಿಚಿತ ಪದವಾದ “ಪ್ರವರ”ವು ವಿಸ್ತೃತ ರಕ್ತಸಂಬಂಧಿ ಸಮೂಹಗಳನ್ನು ಸೂಚಿಸುತ್ತದೆ. ಬ್ರಾಹ್ಮಣರು ಸಂಪ್ರದಾಯದ ಪ್ರಕಾರ ಹದಿನೆಂಟು ಗೋತ್ರಗಳನ್ನು ಅನುಸರಿಸುತ್ತಾರೆ, ಉದಾಹರಣೆಗೆ ಭಾರದ್ವಾಜ, ಗೌತಮ, ವಸಿಷ್ಠ ಇತ್ಯಾದಿ.ಇದು ವಿವಾಹ ಪಧ್ಧತಿಗಳ ಮೇಲೆ ನಿಯಂತ್ರಣ ಹೊಂದಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧಕರು ನಡೆಸಿದ ಇತ್ತಿಚ್ಚಿನ ಅಧ್ಯಯನವು ಈ ಗೋತ್ರ ಪಧ್ದತಿ ಹಾಗೂ ಇದರ ಹಿಂದಿರುವ ಪರಂಪರೆಯನ್ನು ವಿಶ್ಲೇ಼ಷಣೆ ಮಾಡಿ ಜಗತ್ತಿಗೊಂದು ವೈಜ್ಞಾನಿಕ ಬೆಳಕನ್ನು ಹೊರಚೆಲ್ಲಿದೆ. ಈ ಆಚರಣೆ ಹಾಗೂ ಪಧ್ಧತಿಗಳ ಮೂಲವನ್ನು ಅನ್ವೇಷಿಸಿ ಗೋತ್ರ ಪದ್ದತಿಗೊಂದು ವೈಜ್ಞಾನಿಕ ರೂಪವನ್ನು ನೀಡಿದ್ದಾರೆ. ಅಧ್ಯಯನದಲ್ಲಿ ಸುಮಾರು 334 ಭಾರತೀಯ ಬ್ರಾಹ್ಮಣ ಸಮುದಾಯದ ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಡಿಎನ್‌ಎ ಯ ಪುನರಾವರ್ತಿತ ಭಾಗಗಳನ್ನು(ಶಾರ್ಟ್ ಟ್ಯಾಂಡಮ್ ರಿಪೀಟ್ಸ್) ವಿಶ್ಲೇ಼ಷಿಸಲಾಯಿತು. ತದನಂತರ ಅವುಗಳನ್ನು 1,300 ಕ್ಕೂ ಹೆಚ್ಚು ಯುರೇಷಿಯನ್ ಪುರುಷರ ಡಿಎನ್ ಎ ಮಾದರಿಗಳೊಂದಿಗೆ ಹೋಲಿಕೆ ಮಾಡಲಾಯಿತು. ಇದರಿಂದ ಕಂಡುಬಂದ ವಿಚಾರವೇನೆಂದರೆ ಭಾರತದಾದ್ಯಂತ ಇರುವ ಬ್ರಾಹ್ಮಣರು ಸಾಮಾನ್ಯ ಪಿತೃವಂಶವನ್ನು ಹೊಂದಿದ್ದಾರೆ ಎಂದು .ಇದು ಆರಂಭಿಕ ಇಂಡೋ-ಯುರೋಪಿಯನ್ ವಲಸೆಗೆ ಸಂಬಂಧಿಸಿದೆ.
ಹೊಂದಾಣಿಕೆಯ ಅಂಶ : R1a ಹ್ಯಾಪ್ಲೋಗ್ರೂಪ್
ಅಧ್ಯಯನವು ಕಂಡುಕೊಂಡ ಪ್ರಕಾರ ಭಾರತೀಯ ಬ್ರಾಹ್ಮಣ ಸಮುದಾಯದ ಜನರು ಮತ್ತು ಪಶ್ಚಿಮದ ಇರಾನಿಯರು ,ತಜಿಕರು ಮತ್ತು ಉಜ್ಬೇಕರು ಸಾಮಾನ್ಯವಾದ R1a ಪೂರ್ವಜರನ್ನು ಹೊಂದಿದ್ದರು ಎಂದು ಹೇಳಲಾಗಿದೆ ( R1a ಎಂಬುದು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ Y-ಕ್ರೋಮೋಸೋಮ್ ಮೂಲಕ ಸಾಗುವ ಅಂಶ).ಇದು ಬಹುಶಃ ಇಂಡೋ-ಇರಾನಿಯನ್ ವಿಭಜನೆಯ ಮುಂಚಿತವಾಗಿಯೇ ಉತ್ತರ ಅಫ್ ಘಾನಿಸ್ತಾನದಲ್ಲಿ ಉಂಟಾಗಿರಬಹುದು ಎಂದು ಹೇಳಲಾಗುತ್ತದೆ. ಆದರೆ ವಲಸೆ ಮಾದರಿಗಳನ್ನು ಪರಿಶೀಲಿಸಿದಾಗ ಅದು ವಿಭಿನ್ನವಾಗಿತ್ತು.ಅನುವಂಶೀಯ ಸಂಬಂಧಗಳನ್ನು ಹೋಲಿಕೆ ಮಾಡಿದಾಗ, ಉತ್ತರ ಭಾರತದ ಬ್ರಾಹ್ಮಣ ಸಮುದಾಯದ ಜನರು ಪಶ್ತೂನ್ ಗಳಂತಹ ಅಫ್ಘಾನ್ ಜನಾಂಗದೊಡನೆ ಹೆಚ್ಚಿನ ಜೀನ್ ಸಾಮ್ಯತೆಯನ್ನು ಹೊಂದಿದ್ದಾರೆ ಎನ್ನಲಾಗಿದೆ . ಇದಕ್ಕೆ ಅನುವಂಶೀಯ ಸಂಯೋಜನೆ ಅಥವಾ ಸಂಕರಣೆಯು(ಮಿಶ್ರತಳಿ)ಕಾರಣವಾಗಿರಬಹುದು. ಕೊಂಕಣಿ ಮತ್ತು ದಕ್ಷಿಣದ ಬ್ರಾಹ್ಮಣರು ಬಹಳ ಮುಂಚೆಯೇ ವಿಭಜನೆಗೊಂಡಿದ್ದು, ಪಶ್ಷಿಮ ಇರಾನಿಯನ್ ಜನರೊಂದಿಗೆ ಇರುವ ಹೊಂದಾಣಿಕೆಯ ಗುರುತನ್ನು ಉಳಿಸಿಕೊಂಡಿದ್ದಾರೆ.
ಈ ಅಧ್ಯಯನವು ವಲಸೆಯ ಸಮಯವನ್ನು ನಿರ್ದಿಷ್ಠವಾಗಿ ಅಂದಾಜು ಮಾಡಿಲ್ಲ ಅದರೆ ವಂಶಾವಳಿ ಹಂಚಿಕೆ ಮಾದರಿಗಳು ಮತ್ತು ಉತ್ತರ ಮತ್ತು ದಕ್ಷಿಣ ಭಾರತದ ಬ್ರಾಹ್ಮಣ ಜನಾಂಗದಲ್ಲಿ ಕಂಡುಬಂದ ಪಶ್ತೂನ್ ಗಳಲ್ಲಿರುವ R1a ಮಾದರಿಯ ವ್ಯತ್ಯಾಸಗಳನ್ನು ಆಧರಿಸಿ ಭಾರತದ ಸುತ್ತಲಿನ ಭೌಗೋಳಿಕ ಪ್ರದೇಶಗಳಿಗೆ ಕಾಲಾಂತರದಲ್ಲಿ ಎರಡು ಪ್ರಮುಖ R1a ಯ ಪ್ರವೇಶವಾಗಿದೆ ಎಂಬುದನ್ನು ಮನಗಾಣಬಹುದು. ಇತ್ತಿಚ್ಚಿನ ಅಧ್ಯಯನಗಳು ಹೇಳುವುದೇನೆಂದರೆ ಇಂಡೋ-ಯುರೋಪಿಯನ್ ಭಾಷೆ, ಸಂಸ್ಕೃತಿ ಅಥವಾ ಜನಾಂಗದ ಪ್ರಭಾವ, ಭಾರತ ಮತ್ತು ಅದರ ಸುತ್ತಲಿನ ಭೌಗೋಳಿಕ ಪ್ರದೇಶಗಳಿಗೆ ಸುಮಾರು 4,000 ಪರ್ಷಗಳ ಹಿಂದೆಯೇ ಪ್ರವೇಶಿಸಿದೆ ಎಂದು. ಮಂಗಳೂರು ವಿಶ್ವವಿದ್ಯಾನಿಲಯದ ಅದೇ ಸಂಶೋಧನಾ ತಂಡದ ಸಂಶೋಧಕರು ತಮ್ಮ ಇನ್ನೊಂದು ಅಧ್ಯಯನದ ಮೂಲಕ , ಬ್ರಾಹ್ಮಣರು ಮತ್ತು ಅಫ್ಘಾನ್ ಜನರ ಸಾಮಾನ್ಯ/ಮೂಲ ಪೂರ್ವಜರ ನಡುವೆ ಸುಮಾರು 500-800 ವರ್ಷಗಳ ಅಂತರವಿರಬಹುದು ಎಂದು ಅಂದಾಜಿಸಿದ್ದಾರೆ. ಅಂದರೆ ಸಂಶೋಧನೆಯ ಪ್ರಕಾರ, ಬ್ರಾಹ್ಮಣರ ಪೂರ್ವಜರು ಅಫ್ಘಾನಿಗಳ ಪೂರ್ವಜರಿಗಿಂತ ಮೊದಲೇ ಭಾರತದ ಸುತ್ತಲಿನ ಭೌಗೋಳಿಕ ಪ್ರದೇಶಗಳಲ್ಲಿ ನೆಲೆಸಿದ್ದರು. ಆದರೆ ಪುರಾತನ ಕಾಲದ ಈ ಎಲ್ಲಾ ಘಟನೆಗಳ ನಿರ್ದಿಷ್ಠವಾದ ಕಾಲಘಟ್ಟವನ್ನು ದಾಖಲಿಸಲು ಹಾಗು ಮಾಹಿತಿಗಳನ್ನು ಸೃಜಿಸಲು ಇನ್ನಷ್ಷು ಸಂಶೋಧನೆಗಳ ಅಗತ್ಯತೆ ಇದೆ.
ಜನಸಂಖ್ಯಾ ತಳಿಶಾಸ್ತ್ರದ ಸಂಶೋಧಕರಾದ ಡಾ.ಜೈಸನ್ ಸೆಕ್ವೇರಾರವರು ಇಂತಹ ವಿಚಾರಗಳ ಅಧ್ಯಯನದ ಪ್ರಾಮುಖ್ಯತೆ ಮತ್ತು ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. ”ಭಾರತವು ಮಾನವ ವೈವಿಧ್ಯತೆಯ ಅಮೂಲ್ಯ ಸಂಪತ್ತನ್ನು ಹೊಂದಿದೆ. ನೂರಾರು ನಿವಿಧ ಜನಾಂಗಗಳನ್ನು ಒಳಗೊಂಡ ದೇಶ ನಮ್ಮದಾಗಿದೆ” ಎಂದು ಹೇಳುತ್ತಾರೆ. “ನಾವುಗಳು ವಸ್ತುಸಂಗ್ರಹಾಲಯಗಳಲ್ಲಿ ಹೇಗೆ ಪುರಾತನ ಕಾಲದ ಅಥವಾ ಪ್ರಾಚೀನ ವಸ್ತುಗಳನ್ನು ಸಂರಕ್ಷಿಸುತ್ತೇವೆಯೋ ಅದೇ ರೀತಿ ವಿವಿಧ ಜನಾಂಗದ ಅನುವಂಶೀಯ ಮಾಹಿತಿಯನ್ನೂ(ಡೇಟಾ)ಸಹ ಕಲೆಹಾಕಿ ಸಂಗ್ರಹಿಸಿ ದಾಖಲಿಸಬೇಕು, ಇದು ಭವಿಷ್ಯದ ಪೀಳಿಗೆಗೆ ಉಪಯುಕ್ತವಾಗುತ್ತದೆ. ಹಾಗೆಯೇ ಸಾಧ್ಯವಾದಷ್ಟು ಪ್ರತಿ ಸಮುದಾಯದ ಯುವಜನಾಂಗವು ಮುಂದೆ ನಿಂತು ಇಂತಹ ಯೋಜನಾ ಕಾರ್ಯದ ನಾಯಕತ್ವ ವಹಿಸಬೇಕು” ಎಂದು ಅವರು ಯುವಜನತೆಯನ್ನು ಪ್ರೇರೇಪಿಸುತ್ತಾರೆ.
ಪ್ರೊ. ಎಂ.ಎಸ್ ಮುಸ್ತಾಕ್ ರವರು , “ಭಾರತ ಸರ್ಕಾರದ ನೇತೃತ್ವದ -ಜೀನೋಮ್ ಇಂಡಿಯಾ ಪ್ರಾಜೆಕ್ಟ್ ಮಾಹಿತಿಯು ಈಗ ಲಭ್ಯವಿರುವುದರಿಂದ ಪಾನ್ ಇಂಡಿಯಾದಂತಹ ದೇಶವ್ಯಾಪಿ ಸಹಯೋಗಗಳು ಮುಂದಿನ ಸಂಶೋಧನೆ ಹಾಗೂ ಅಭಿವೃಧ್ದಿಸಂಬಧಿ ಚಟುವಟಿಕೆಗಳಿಗೆ ಉತ್ತಮ ಅವಕಾಶವನ್ನುಒದಗಿಸಿಕೊಟ್ಟಿದೆ” ಎಂದು ಹೇಳುತ್ತಾರೆ. ಈ ಗೋತ್ರಗಳ ಅಧ್ಯಯನವು ಕರ್ನಾಟಕ, ಹರಿಯಾಣ, ಮಧ್ಯಪ್ರದೇಶ, ನವದೆಹಲಿ ಮತ್ತುಸ್ವಿಟ್ಜರ್ಲಾಂಡ್ ನ ಸಂಶೋಧಕರ ಸಹಯೋಗದಲ್ಲಿ ನಡೆದಿದೆ.
Report by: Bindhya, Mangalore University
Original article: https://doi.org/10.1007/s00438-025-02280-4

Comments
Post a Comment